Mungaru_Maleye
[00:21.53] ಮುಂಗಾರು ಮಳೆಯೇ..
[00:26.03] ಏನು ನಿನ್ನ ಹನಿಗಳ ಲೀಲೆ
[00:29.79] ನಿನ್ನ ಮುಗಿಲ ಸಾಲೆ..
[00:33.54] ಧರೆಯ ಕೊರಳ ಪ್ರೇಮದ ಮಾಲೆ..
[00:37.30] ಸುರಿವ ಒಲುಮೆಯ ಜಡಿ ಮಳೆಗೆ..
[00:40.78] ಪ್ರೀತಿ ಮೂಡಿದೆ
[00:44.28] ಯಾವ ಚಿಪ್ಪಿನಲ್ಲಿ..
[00:48.28] ಯಾವ ಹನಿಯು ಮುತ್ತಾಗುವುದೊ..
[00:52.06] ಒಲವು ಎಲ್ಲಿ ಕುಡಿ ಒಡೆಯುವುದೊ..
[00:55.80] ತಿಳಿಯದಾಗಿದೆ
[00:59.31] ಮುಂಗಾರು ಮಳೆಯೇ..
[01:03.29] ಏನು ನಿನ್ನ ಹನಿಗಳ ಲೀಲೆ
[01:32.31] ಭುವಿ ಕೆನ್ನೆ ತುಂಬ..
[01:36.28] ಮುಗಿಲು ಸುರಿದ ಮುತ್ತಿನ ಗುರುತು
[01:40.29] ನನ್ನ ಎದೆಯ ತುಂಬ..
[01:43.54] ಅವಳು ಬಂದ ಹೆಜ್ಜೆಯ ಗುರುತು..
[01:47.53] ಹೆಜ್ಜೆ ಗೆಜ್ಜೆಯ ಸವಿ ಸದ್ದು..
[01:51.30] ಪ್ರೇಮನಾದವೊ
[01:54.79] ಎಳೆ ಮುಗಿಲಿನಲ್ಲಿ..
[01:58.30] ರಂಗು ಚೆಲ್ಲಿ ನಿಂತಳು ಅವಳು..
[02:02.29] ಬರೆದು ಹೆಸರ ಕಾಮನ ಬಿಲ್ಲು...
[02:06.04] ಏನು ಮೋಡಿಯೊ
[02:09.53] ಮುಂಗಾರು ಮಳೆಯೇ..
[02:13.29] ಏನು ನಿನ್ನ ಹನಿಗಳ ಲೀಲೆ
[02:38.78] ಯಾವ ಹನಿಗಳಿಂದ..
[02:42.81] ಯಾವ ನೆಲವು ಹಸಿರಾಗುವುದೊ
[02:46.56] ಯಾರ ಸ್ಪರ್ಷದಿಂದ..
[02:50.29] ಯಾರ ಮನವು ಹಸಿಯಾಗುವುದೊ..
[02:53.78] ಯಾರ ಉಸಿರಲ್ಯಾರ ಹೆಸರೊ..
[02:57.80] ಯಾರು ಬರೆದರೊ
[03:01.29] ಯಾವ ಪ್ರೀತಿ ಹೂವು..
[03:05.54] ಯಾರ ಹೃದಯದಲ್ಲರಳುವುದೊ..
[03:08.54] ಯಾರ ಪ್ರೇಮ ಪೂಜೆಗೆ ಮುಡಿಪೊ..
[03:12.29] ಯಾರು ಬಲ್ಲರು
[03:16.06] ಮುಂಗಾರು ಮಳೆಯೇ..
[03:19.54] ಏನು ನಿನ್ನ ಹನಿಗಳ ಲೀಲೆ
[03:49.04] ಒಲವ ಚೆಂದಮಾಮ..
[03:52.79] ನಗುತ ಬಂದ ಮನದಂಗಳಕೆ
[03:56.55] ಪ್ರೀತಿ ಬೆಳಕಿನಲ್ಲಿ..
[04:00.05] ಹೃದಯ ಹೊರಟಿದೆ ಮೆರವಣಿಗೆ..
[04:03.79] ಅವಳ ಪ್ರೇಮದೂರಿನ ಕಡೆಗೆ..
[04:07.79] ಪ್ರೀತಿ ಪಯಣವೊ
[04:11.29] ಪ್ರಣಯದೂರಿನಲ್ಲಿ ಕಳೆದು ಹೋದ ಸುಖವ ಇಂದು..
[04:18.80] ಧನ್ಯನಾದೆ ಪಡೆದುಕೊಂಡು..
[04:22.55] ಹೊಸ ಜನ್ಮವೋ
[04:26.05] ಮುಂಗಾರು ಮಳೆಯೇ..
[04:30.04] ಏನು ನಿನ್ನ ಹನಿಗಳ ಲೀಲೆ
