Lrc Player

Tajaa Samachara - Male Melody

Unknown artist
[04:49.04]·Synced by Guest·
This lyric sheet isn't paired with a song yet, so lines are shown but won't sync or seek.

[00:00.38] ಹಾಡು: ತಾಜಾ ಸಮಾಚಾರ

[00:04.13] ರಚನೆ: ಜಯಂತ ಕಾಯ್ಕಿಣಿ

[00:04.88] ಸಂಗೀತ : ಡಿ. ಇಮ್ಮಾನ್

[00:06.13] ಗಾಯನ: ಜಿತಿನ್ ರಾಜ್

[00:07.65] ಚಿತ್ರ: ನಟಸಾರ್ವಭೌಮ

[00:11.89] ತಾಜಾ ಸಮಾಚಾರ ಹೇಳಲಿ ನಾನು ಯಾರಿಗೆ,

[00:30.88] ಅನಾಯಾಸವಾಗಿ ಸಿಕ್ಕೆನು ನಿನ್ನ ದಾಳಿಗೆ;

[00:38.88] ಹೃದಯದ ಗತಿ ನಾಜೂಕು, ಕೊಡುವೆನು ಕಿವಿಯಲಿ ವರದಿ;

[00:45.63] ಗುಣಪಡಿಸಲು ನೀ ಬೇಕು, ಬರುವುದೆ ನನ್ನಯ ಸರದಿ.

[00:53.63] ಎದೆಗೊರಗಿ ಆಲಿಸಿ ಚಲುವೆ ಮಾಡಿಬಿಡು ತಪಾಸಣೆ ಶುರೂ.

[01:02.38] ತಾಜಾ ಸಮಾಚಾರ ಹೇಳಲಿ ನಾನು ಯಾರಿಗೆ,

[01:09.88] ಅನಾಯಾಸವಾಗಿ ಸಿಕ್ಕೆನು ನಿನ್ನ ದಾಳಿಗೆ;

[01:28.38] ಜತೆ ನಿಲ್ಲುತ್ತ ಕೂರುತ್ತ ನಿನ್ನೊಂದಿಗೆ, ಸಖಿ ನಾನಾಗುವೆ ನಿಪುಣ;

[01:47.65] ಕನಸೆಂಬ ಖಜಾನೆ ಇಗೋ ತುಂಬಿದೆ, ತುಸು ದೂರಾದರೂ ಕಠಿಣ

[01:55.13] ಘಮಘಮಿಸಿ ಕವಿದ ಹೆರಳಲ್ಲೀಗ ಕಳೆದೋಗೋದೇ ಪರಮಾನಂದ

[02:02.64] ಅರೆಬಿರಿದು ನಗುವ ಸಿಹಿ ಹೂವಂತೆ ಪಿಸುಮಾತಾಡು ತುಸು ಜೋರಿಂದ

[02:10.13] ಮನ ಈಗಾಗಲೆ ತೆರೆದೋದುತ್ತಿದೆ, ಬರೆಯದಿರುವ ಕಾಗದ

[02:19.13] ತಾಜಾ ಸಮಾಚಾರ ಹೇಳಲಿ ನಾನು ಯಾರಿಗೆ,

[02:26.89] ಅನಾಯಾಸವಾಗಿ ಸಿಕ್ಕೆನು ನಿನ್ನ ದಾಳಿಗೆ;

[02:48.39] ನನ್ನ ಕಣ್ಣಲ್ಲಿ ಕಣ್ಣಿಟ್ಟು ನೀ ನೋಡಿಕೋ ನಿನ್ನ ಮುದ್ದಾಗಿರೋ ನಿಲುವು

[03:15.63] ಬರಿದಾದಂಥ ಬಾಳಲ್ಲಿ ಬಂದಂತಿದೆ ಬಲು ರೋಮಾಂಚಕ ತಿರುವು

[03:23.39] ಗರಿಗೆದರಿ ಸನಿಹ ಕುಣಿದಾಡುತ್ತ, ಮನ ತಂತಾನೇ ನವಿಲಾದಂತೆ

[03:31.13] ಅವಿತಿರುವ ಒಲವು ಬಯಲಾಗುತ್ತ, ಕ್ಷಣ ಇನ್ನಷ್ಟು ನವಿರಾದಂತೆ

[03:38.63] ಪುಟ ಅಚ್ಚಾಗಿದೆ, ಹಠ ಹೆಚ್ಚಾಗಿದೆ, ಎದುರೆ ಇರಲು ದೇವತೆ|

[03:47.40] ತಾಜಾ ಸಮಾಚಾರ ಹೇಳಲಿ ನಾನು ಯಾರಿಗೆ,

[03:54.89] ಅನಾಯಾಸವಾಗಿ ಸಿಕ್ಕೆನು ನಿನ್ನ ದಾಳಿಗೆ;

[04:01.63] ಹೃದಯದ ಗತಿ ನಾಜೂಕು, ಕೊಡುವೆನು ಕಿವಿಯಲಿ ವರದಿ;

[04:09.63] ಗುಣಪಡಿಸಲು ನೀ ಬೇಕು, ಬರುವುದೆ ನನ್ನಯ ಸರದಿ.

[04:17.13] ಎದೆಗೊರಗಿ ಆಲಿಸಿ ಚಲುವೆ ಮಾಡಿಬಿಡು ತಪಾಸಣೆ ಶುರೂ.