Matinalli helalarenu
[00:38.37] ಮಾತಿನಲ್ಲಿ ಹೇಳಲಾರೆನು, ರೇಖೆಯಲ್ಲಿ ಗೀಚಲಾರೆನು
[00:48.23] ಆದರೂನು ಹಾಡದೇನೆ ಉಳಿಯಲಾರೆನು
[00:53.54] ಅಂಥ ರೂಪಸಿ ನನ್ನ ಪ್ರೇಯಸಿ
[00:58.87] ಎಲ್ಲಿ ಇರುವಳೋ ನನ್ನ ಕಾಯಿಸಿ
[01:04.17] ನಾನು ಪ್ರೇಮ ರೋಗಿ, ದಯಮಾಡಿ ವಾಸಿ ಮಾಡಬೇಡಿ
[01:09.48] ಅಂಥ ರೂಪಸಿ ನನ್ನ ಪ್ರೇಯಸಿ
[01:14.77] ಒಮ್ಮೆ ಅವಳಿಗೆ ನನ್ನ ತೋರಿಸಿ
[02:10.91] ಕಣ್ಣಲ್ಲಿದೆ ಆ ಕಣ್ಣಲ್ಲಿದೆ, ಹೊಂಬೆಳಕಿನ ನವ ನೀಲಾಂಜನ
[02:21.25] ಇನ್ನೆಲ್ಲಿದೆ ಅಹಾ ಇನ್ನೆಲ್ಲಿದೆ, ಹೂಮನಸಿನ ಆ ಮಧುಗುಂಜನ,
[02:32.12] ಬೇರೆ ಏನು ಕಾಣಲಾರೆ,ಯಾರ ನಾನು ದೂರಲಾರೆ,
[02:37.21] ಸಾಕು ಇನ್ನು ದೂರವನ್ನು ತಾಳಲಾರೆನು,
[02:42.25] ನನ್ನ ಕನಸಿನಲ್ಲಿ ದಯಮಾಡಿ ಪಾಲು ಕೇಳಬೇಡಿ,
[02:48.29] ಅಂಥ ರೂಪಸಿ ನನ್ನ ಪ್ರೇಯಸಿ
[02:53.60] ಒಮ್ಮೆ ಅವಳಿಗೆ ನನ್ನ ತೋರಿಸಿ
[03:01.68] ಮಾತಿನಲ್ಲಿ ಹೇಳಲಾರೆನು, ರೇಖೆಯಲ್ಲಿ ಗೀಚಲಾರೆನು
[03:12.06] ಆದರೂನು ಹಾಡದೇನೆ ಉಳಿಯಲಾರೆನು
[03:39.51] ನಗೆಯಲ್ಲಿದೆ ಆ ಬಗೆಯಲ್ಲಿದೆ, ಬಗೆಹರಿಯದ ಆ ಅವಲೋಕನ,
[03:49.59] ನಡೆಯಲ್ಲಿದೆ ಆ ನುಡಿಯಲ್ಲಿದೆ, ತಲೆ ಕೆಡಿಸುವ ಆ ಆಮಂತ್ರಣ,
[04:00.01] ಕನಸಿಗಿಂತ ಚಂದವಾಗಿ, ಅಳಿಸದಂತ ಗಂಧವಾಗಿ,
[04:05.58] ಮೊದಲಬಾರಿ ಕಂಡ ಕ್ಷಣವೇ ಬಂಧಿಯಾದೆನು,
[04:10.61] ಹೋದೆ ನಾನು ಕಳೆದು, ದಯಮಾಡಿ ಪತ್ತೆ ಮಾಡಬೇಡಿ,
[04:16.18] ಅಂಥ ರೂಪಸಿ ನನ್ನ ಪ್ರೇಯಸಿ
[04:21.47] ಒಮ್ಮೆ ಅವಳಿಗೆ ನನ್ನ ತೋರಿಸಿ
[04:29.55] ಮಾತಿನಲ್ಲಿ ಹೇಳಲಾರೆನು, ರೇಖೆಯಲ್ಲಿ ಗೀಚಲಾರೆನು
[04:39.91] ಆದರೂನು ಹಾಡದೇನೆ ಉಳಿಯಲಾರೆನು
[04:45.45] ಅಂಥ ರೂಪಸಿ ನನ್ನ ಪ್ರೇಯಸಿ
[04:50.76] ಎಲ್ಲಿ ಇರುವಳೋ ನನ್ನ ಕಾಯಿಸಿ
[04:56.07] ನಾನು ಪ್ರೇಮ ರೋಗಿ, ದಯಮಾಡಿ ವಾಸಿ ಮಾಡಬೇಡಿ
[05:01.60] ಅಂಥ ರೂಪಸಿ ನನ್ನ ಪ್ರೇಯಸಿ
[05:06.68] ಒಮ್ಮೆ ಅವಳಿಗೆ ನನ್ನ ತೋರಿಸಿ
