Lrc Player

Ninna danigaagi

Karthik, hansika ayyar
[04:12.71]·Synced by Guest·
This lyric sheet isn't paired with a song yet, so lines are shown but won't sync or seek.

[00:40.66] ನಿನ್ನ ದನಿಗಾಗಿ ನಿನ್ನ ಕರೆಗಾಗಿ

[00:43.93] ನಿನ್ನ ಸಲುವಾಗಿ ಕಾಯುವೆ

[00:47.45] ತೀರ ಬಳಿ ಬಂದ ನೀನು ನನಗೊಂದು

[00:50.72] ಸೋಜಿಗದಂತೆ ಕಾಣುವೆ

[00:53.99] ಒಂಟಿ ಇರುವಾಗ ಕುಂಟು ನೆಪ ತೋರಿ

[00:57.29] ಬಂದ ಕನಸೆಲ್ಲ ನಿನ್ನದು

[01:00.82] ನಾನು ಅನುರಾಗಿ ನೀನೆ ನನಗಾಗಿ

[01:04.08] ಎನ್ನುವ ಭಾವನೆ ನನ್ನದು

[01:07.35] ಕಣ್ಣಿನಲ್ಲೇನೆ ಹೊಮ್ಮಿದೆ, ಕೋಮಲ ಕೋರಿಕೆ

[01:14.17] ಮುತ್ತಿನ ಅಂಕಿತ ಬೇಕಲ್ಲ ಒಪ್ಪಂದಕೆ

[01:22.47] ನಿನ್ನ ದನಿಗಾಗಿ ನಿನ್ನ ಕರೆಗಾಗಿ

[01:25.75] ನಿನ್ನ ಸಲುವಾಗಿ ಕಾಯುವೆ

[01:29.04] ತೀರ ಬಳಿ ಬಂದ ನೀನು ನನಗೊಂದು

[01:32.32] ಸೋಜಿಗದಂತೆ ಕಾಣುವೆ|

[02:02.21] ಹೆದರುತ, ಅರಳಿವೆ, ನಾನಾ ಹಂಬಲ

[02:09.03] ನಿನ್ನನೇ ತಲುಪಲು

[02:12.54] ಮನಸಲಿ, ಸವಿಗನಸಿನ, ಸಾಲೇ ನಿಂತಿದೆ

[02:19.10] ಅಂಗಡಿ ತೆರೆಯಲು

[02:21.92] ಎಲ್ಲೇ ನಾ ಹೋದರೂ, ಗಮನ ಇಲ್ಲೇ ಇದೆ

[02:28.31] ಸನಿಹವೇ ನೀ ಬೇಕೆನ್ನುವ, ಹಠವೂ ಹೆಚ್ಚಾಗಿದೆ

[02:34.86] ಈಗ, ಚಂದ್ರನ ಒಪ್ಪಿಗೆ ಬೇಕೇನು ಸಲ್ಲಾಪಕೆ

[03:02.88] ನೆನಪಿನ, ಬೀದಿಯ, ಎಲ್ಲಾ ಗೋಡೆಗೂ

[03:08.92] ನಿನ್ನದೇ ಮೊಗವಿದೆ

[03:12.24] ಸಲಿಗೆಯ, ತಕರಾರಿನ, ಸಣ್ಣ ಕೋಪಕೂ

[03:19.03] ಬೇರೆಯೇ ಸುಖವಿದೆ

[03:21.88] ಇನ್ನೂ ಇಂಪಾಗಿದೆ ಕರೆವ ನಿನ್ನ ಸ್ವರ

[03:28.41] ಹೃದಯದಲಿ ಎಂದೆಂದಿಗೂ ಇರಲೀ ಹಸ್ತಾಕ್ಷರ

[03:34.76] ಬೇಗ ಮೂಡಲಿ ಮತ್ಸರ ಈ ಭೂಮಿ ಆಕಾಶಕೆ

[03:42.55] ನಿನ್ನ ದನಿಗಾಗಿ ನಿನ್ನ ಕರೆಗಾಗಿ

[03:45.58] ನಿನ್ನ ಸಲುವಾಗಿ ಕಾಯುವೆ

[03:48.88] ತೀರ ಬಳಿ ಬಂದ ನೀನು ನನಗೊಂದು

[03:52.68] ಸೋಜಿಗದಂತೆ ಕಾಣುವೆ