Kaiya chivuti omme
[00:19.58] ಕೈಯ ಚಿವುಟಿ ಒಮ್ಮೆ ನೋಡಿಕೊಳ್ಳಲೇನು
[00:24.36] ನನ್ನ ಕಣ್ಣ ನಾನೇ ನಂಬದಾದೇನು
[00:29.42] ಕೈಯ ಚಿವುಟಿ ಒಮ್ಮೆ ನೋಡಿಕೊಳ್ಳಲೇನು
[00:34.44] ನನ್ನ ಕಣ್ಣ ನಾನೇ ನಂಬದಾದೇನು
[00:39.50] ಬಿಗಿ ಹಿಡಿದ ಬೆರಳ ಸಡಿಲಿಸ ಬೇಡ
[00:44.56] ಕಲೆತಿರೋ ಈ ಕಣ್ಣಾ ಕದಲಿಸಬೇಡ
[00:49.61] ಅರೆಗಳಿಗೆಯೂ ನನ್ನ ತೊರೆದಿರಬೇಡ
[00:54.38] ತೊರೆದಿರುವ ಕ್ಷಣವ ನೆನೆವುದು ಬೇಡ
[00:59.16] ಕೈಯ ಚಿವುಟಿ ಒಮ್ಮೆ ನೋಡಿಕೊಳ್ಳಲೇನು
[01:03.92] ನನ್ನ ಕಣ್ಣ ನಾನೇ ನಂಬದಾದೇನು
[01:28.83] ನಿನ್ನ ಅಂಗೈ ಮೇಲೆ ಮುಖವಿರಿಸಿ
[01:33.60] ನಿನ್ನೆ ಹೀಗೆ ನೋಡುವಾಸೆ
[01:38.38] ಎಲ್ಲ ಜನುಮ ನಿನ್ನೆ ಅನುಸರಿಸಿ
[01:43.53] ನಿನ್ನ ಉಸಿರಾ ಸೇರುವಾಸೆ
[01:48.55] ಗಂಟಲು ಬಿಗಿದಿದೆ ಮಾತು ಬಾರದೆ
[01:53.58] ಕಂಗಳು ತುಂಬಿವೆ ಸಂತೋಷಕೆ
[01:58.60] ಕೊರಳ ಮೇಲಿದೆ ನಿನ್ನಯ ಉಡುಗೊರೆ
[02:03.67] ಇದಕೂ ಮೀರಿದ ಬದುಕೇತಕೆ
[02:08.21] ಕೈಯ ಚಿವುಟಿ ಒಮ್ಮೆ ನೋಡಿಕೊಳ್ಳಲೇನು
[02:12.98] ನನ್ನ ಕಣ್ಣ ನಾನೇ ನಂಬದಾದೇನು
[02:37.39] ಗೊತ್ತೇ ಇರದ ಅವನ ಜಗದೊಳಗೆ
[02:42.68] ಮೊದಲ ಹೆಜ್ಜೆ ಇಡುವಂತಿದೆ
[02:47.70] ಅವನ ಹೆಸರ ಕೂಗಿ ಕರೆದಾಗ
[02:52.48] ನನ್ನೇ ಯಾರೋ ಕರೆದಂತಿದೆ
[02:57.78] ನಾಚಿಕೆ ಕಣ್ಣಲಿ ಹೇಗೆ ನೋಡಲಿ
[03:02.80] ಬೆರಳು ಬಿಡಿಸಿದೆ ರಂಗೋಲಿಯ
[03:07.58] ಒಲವ ದಿಬ್ಬಣ ಏರಿ ಹೊರಟೆನಾ
[03:12.63] ತೀರ ಹೊಸದೀ ರೋಮಾಂಚನ
[03:17.17] ಕೈಯ ಹಿಡಿದು ಬರುವೆ ನಿನ್ನ ದಾರಿಯಲ್ಲಿ
[03:22.21] ಇಂದು ನನ್ನ ಕನಸು ನಿನ್ನ ಕಣ್ಣಲಿ
[03:26.98] ಕೈಯ ಹಿಡಿದು ಬರುವೆ ನಿನ್ನ ದಾರಿಯಲ್ಲಿ
[03:32.03] ಇಂದು ನನ್ನ ಕನಸು ನಿನ್ನ ಕಣ್ಣಲಿ
[03:37.31] ಆಸೆಗಳ ಚುಕ್ಕಿ ಇಟ್ಟೇನು ಕನಸಲಿ
[03:42.08] ಮೂಡಿಸು ಚಿತ್ರವ ನನ್ನಯ ಬದುಕಲಿ
[03:46.87] ಕೈಯ ಹಿಡಿದು ಬರುವೆ ನಿನ್ನ ದಾರಿಯಲ್ಲಿ
[03:51.65] ಇಂದು ನನ್ನ ಕನಸು ನಿನ್ನ ಕಣ್ಣಲಿ
