Aha yenta aakshana
[00:34.93] ಆಹಾ ಎಂಥ ಆ ಕ್ಷಣ ನೆನೆದರೆ ತಲ್ಲಣ
[00:41.32] ತನ್ನಂತಾನೆ ಎದೆಯಲಿ ಪ್ರೀತಿಯ ನರ್ತನ
[00:47.86] ಇದು ಯಾವಾಗ ಹೇಗಾಯ್ತೋ ಯಾಕೆ ಅಂತ ಗೊತ್ತೇ ಆಗಲಿಲ್ಲ
[00:54.90] ಈ ಪ್ರೀತೀಲಿ ಏನಿಂಥ ಮಾಯ ಮಂತ್ರ ಒಂದೂ ತಿಳಿಯಲಿಲ್ಲ
[01:01.96] ಆಹಾ ಎಂಥ ಆ ಕ್ಷಣ ನೆನೆದರೆ ತಲ್ಲಣ
[01:08.77] ತನ್ನಂತಾನೆ ಎದೆಯಲಿ ಪ್ರೀತಿಯ ನರ್ತನ
[01:50.20] ಕಂಗಳ ಮಾತಿಗೆ ತುಟಿಗಳು ಮೌನವು
[01:57.05] ಹೃದಯವು ಬೆರೆತರೆ ಉಳಿದವು ಗೌಣವು
[02:03.98] ನೆನ್ನೆಯವರೆಗೂ ನಾ ಹೇಗೋ ಇದ್ದೆ
[02:07.05] ನಾ ಬೇರೆ ನೀ ಬೇರೆ ಅಂತಿದ್ದೆ
[02:10.59] ನೆಪ ಮಾತ್ರಕೆ ಎರಡು ದೇಹ ಇದೆ
[02:13.96] ಅದರೊಳಗಿರೋ ಪ್ರಾಣವು ಒಂದೇ
[02:17.47] ಈ ಪ್ರಾಣಾನೇ ನಿನಗಾಗಿ ಮೀಸಲಿಡುವೆ ಬಾರೋ ನನ್ನ ಗೆಳೆಯ
[02:23.89] ನಿನ್ನ ಪ್ರೀತಿಗೆ ಏಳೇಳು ಜನ್ಮದಲ್ಲೂ ಮುಡಿಪು ನನ್ನ ಹೃದಯ
[02:30.95] ಆಹಾ ಎಂಥ ಆ ಕ್ಷಣ ನೆನೆದರೆ ತಲ್ಲಣ
[02:37.98] ತನ್ನಂತಾನೆ ಎದೆಯಲಿ ಪ್ರೀತಿಯ ನರ್ತನ
[03:19.76] ನದಿಗಳು ಓಡಿವೆ ಕಡಲನು ಸೇರಲು
[03:26.11] ಚೈತ್ರವ ಕಾದಿವೆ ಹೂಗಳು ಅರಳಲು
[03:32.89] ಸಂಗೀತ ಸಾಹಿತ್ಯ ಒಂದಾದಂತೆ
[03:36.42] ಹಾಲಲ್ಲಿ ಬೆರೆತಿರುವ ಜೇನಂತೆ
[03:39.69] ಸೂಜಿಯ ಹಿಂದಿರುವ ದಾರದಂತೆ
[03:43.19] ನಾ ಬರುವೆ ಜೊತೆಯಾಗಿ ನೆರಳಂತೆ
[03:46.47] ಈ ಪ್ರೀತಿಯು ಈ ನಮ್ಮ ಬಾಳಿನಲ್ಲಿ ಎಂದೂ ಹೀಗೆ ಇರಲಿ
[03:53.01] ನಿನ್ನ ಪ್ರೀತೀನೇ ನನ್ನೆದೆಯ ಜ್ಯೋತಿಯಾಗಿ ಎಂದೂ ಬೆಳಗುತಿರಲಿ
[04:00.33] ಆಹಾ ಎಂಥ ಆ ಕ್ಷಣ ನೆನೆದರೆ ತಲ್ಲಣ
[04:07.16] ತನ್ನಂತಾನೆ ಎದೆಯಲಿ ಪ್ರೀತಿಯ ನರ್ತನ
[04:13.93] ಇದು ಯಾವಾಗ ಹೇಗಾಯ್ತೋ ಯಾಕೆ ಅಂತ ಗೊತ್ತೇ ಆಗಲಿಲ್ಲ
[04:20.60] ಈ ಪ್ರೀತೀಲಿ ಏನಿಂಥ ಮಾಯ ಮಂತ್ರ ಒಂದೂ ತಿಳಿಯಲಿಲ್ಲ
