Anisutide yaako indu
[00:36.86] ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು
[00:44.92] ಮಾಯದ ಲೋಕದಿಂದ ನನಗಾಗೆ ಬಂದವಳೆಂದು
[00:52.70] ಆಹಾ ಎಂತ ಮಧುರ ಯಾತನೇ!
[00:58.54] ಕೊಲ್ಲು ಹುಡುಗಿ ಒಮ್ಮೆ ನನ್ನ ಹಾಗೆ ಸುಮ್ಮನೇ…
[01:08.88] ಅನಿಸುತಿದೆ ಯಾಕೋ ಇಂದು…
[01:44.19] ಸುರಿಯುವ ಸೋನೆಯೂ ಸೂಸಿದೆ ನಿನ್ನದೆ ಪರಿಮಳ
[01:52.03] ಇನ್ಯಾರ ಕನಸಲೂ ನೀನು ಹೋದರೆ ತಳಮಳ
[02:00.09] ಪೂರ್ಣ ಚಂದಿರ ರಜಾ ಹಾಕಿದ ನಿನ್ನಯ ಮೊಗವನು ಕಂಡ ಕ್ಷಣ
[02:08.64] ನಾ ಖೈದಿ ನೀನೆ ಸೆರೆಮನೆ
[02:14.43] ತಬ್ಬಿ ನನ್ನ ಅಪ್ಪಿಕೊ ಒಮ್ಮೆ… ಹಾಗೆ ಸುಮ್ಮನೇ…
[02:24.99] ಅನಿಸುತಿದೆ ಯಾಕೋ ಇಂದು…
[02:46.50] ತುಟಿಗಳ ಹೂವಲಿ ಆಡದ ಮಾತಿನ ಸಿಹಿಯಿದೆ
[02:54.30] ಮನಸಿನ ಪುಟದಲಿ ಕೇವಲ ನಿನ್ನದೆ ಸಹಿಯಿದೆ
[03:02.12] ಹಣೆಯಲಿ ಬರೆಯದ ನಿನ್ನ ಹೆಸರ ಹೃದಯದಿ ನಾನೆ ಕೊರೆದಿರುವೆ
[03:10.43] ನಿನಗುಂಟೆ ಇದರ ಕಲ್ಪನೆ?
[03:16.75] ನನ್ನ ಹೆಸರ ಕೂಗೆ ಒಮ್ಮೆ… ಹಾಗೆ ಸುಮ್ಮನೆ…
[03:42.17] ಅನಿಸುತಿದೆ ಯಾಕೋ ಇಂದು… ನೀನೇನೆ ನನ್ನವಳೆಂದು…
[03:58.80] ಮಾಯದ ಲೋಕದಿಂದ ನನಗಾಗೆ ಬಂದವಳೆಂದು
[04:06.58] ಆಹಾ ಎಂತ ಮಧುರ ಯಾತನೇ!
[04:12.35] ಕೊಲ್ಲು ಹುಡುಗಿ ಒಮ್ಮೆ ನನ್ನ…ಹಾಗೆ ಸುಮ್ಮನೆ…
[04:22.91] ಅನಿಸುತಿದೆ ಯಾಕೋ ಇಂದು
