Lrc Player

Mungaru maleye

Mano murti
[04:50.09]·Synced by Guest·
This lyric sheet isn't paired with a song yet, so lines are shown but won't sync or seek.

[00:22.65] ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ

[00:30.00] ನಿನ್ನ ಮುಗಿಲ ಸಾಲೆ..ಧರೆಯ ಕೊರಳ ಪ್ರೇಮದ ಮಾಲೆ..

[00:37.51] ಸುರಿವ ಒಲುಮೆಯ ಜಡಿ ಮಳೆಗೆ..ಪ್ರೀತಿ ಮೂಡಿದೆ

[00:44.83] ಯಾವ ಚಿಪ್ಪಿನಲ್ಲಿ..ಯಾವ ಹನಿಯು ಮುತ್ತಾಗುವುದೊ..

[00:52.16] ಒಲವು ಎಲ್ಲಿ ಕುಡಿ ಒಡೆಯುವುದೊ..ತಿಳಿಯದಾಗಿದೆ

[00:59.71] ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ

[01:32.91] ಭುವಿ ಕೆನ್ನೆ ತುಂಬ..ಮುಗಿಲು ಸುರಿದ ಮುತ್ತಿನ ಗುರುತು

[01:40.22] ನನ್ನ ಎದೆಯ ತುಂಬ..ಅವಳು ಬಂದ ಹೆಜ್ಜೆಯ ಗುರುತು..

[01:47.79] ಹೆಜ್ಜೆ ಗೆಜ್ಜೆಯ ಸವಿ ಸದ್ದು..ಪ್ರೇಮನಾದವೊ

[01:55.11] ಎಳೆ ಮುಗಿಲಿನಲ್ಲಿ..ರಂಗು ಚೆಲ್ಲಿ ನಿಂತಳು ಅವಳು..

[02:02.68] ಬರೆದು ಹೆಸರ ಕಾಮನ ಬಿಲ್ಲು…ಏನು ಮೋಡಿಯೊ

[02:09.95] ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ

[02:39.15] ಯಾವ ಹನಿಗಳಿಂದ..ಯಾವ ನೆಲವು ಹಸಿರಾಗುವುದೊ

[02:46.97] ಯಾರ ಸ್ಪರ್ಷದಿಂದ..ಯಾರ ಮನವು ಹಸಿಯಾಗುವುದೊ..

[02:54.28] ಯಾರ ಉಸಿರಲ್ಯಾರ ಹೆಸರೊ..ಯಾರು ಬರೆದರೊ

[03:01.58] ಯಾವ ಪ್ರೀತಿ ಹೂವು..ಯಾರ ಹೃದಯದಲ್ಲರಳುವುದೊ..

[03:08.88] ಯಾರ ಪ್ರೇಮ ಪೂಜೆಗೆ ಮುಡಿಪೊ..ಯಾರು ಬಲ್ಲರು

[03:16.41] ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ

[03:49.47] ಒಲವ ಚೆಂದಮಾಮ..ನಗುತ ಬಂದ ಮನದಂಗಳಕೆ

[03:56.80] ಪ್ರೀತಿ ಬೆಳಕಿನಲ್ಲಿ..ಹೃದಯ ಹೊರಟಿದೆ ಮೆರವಣಿಗೆ..

[04:04.08] ಅವಳ ಪ್ರೇಮದೂರಿನ ಕಡೆಗೆ..ಪ್ರೀತಿ ಪಯಣವೊ

[04:11.66] ಪ್ರಣಯದೂರಿನಲ್ಲಿ ಕಳೆದು ಹೋದ ಸುಖವ ಇಂದು..

[04:19.26] ಧನ್ಯನಾದೆ ಪಡೆದುಕೊಂಡು..ಹೊಸ ಜನ್ಮವೋ

[04:26.55] ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ