Lrc Player

Ivanu geleyanalla

Shreya Ghoshal
[03:48.10]·Synced by Guest·
This lyric sheet isn't paired with a song yet, so lines are shown but won't sync or seek.

[00:30.69] ಇವನು ಗೆಳೆಯನಲ್ಲ ಗೆಳತಿ ನಾನು ಮೊದಲೇ ಅಲ್ಲ

[00:37.60] ಇವನು ಇನಿಯನಲ್ಲ ತುಂಬಾ ಸನಿಹ ಬಂದಿಹನಲ್ಲ

[00:44.93] ನೋವಿನಲ್ಲೂ ನಗುತಿಹನಲ್ಲ ಯಾಕೆ ಈ ಥರ

[00:52.24] ಜಾಣ ಮನವೇ ಕೇಳು ಜಾರಬೇಡ ಇವನ ಕಡೆಗೆ

[00:59.65] ಯಾಕೆ ನಿನಗೆ ಸಲ್ಲದ ಸಲಿಗೆ, ಇರಲಿ ಅಂತರ

[01:36.92] ಒಲವ ಹಾದಿಯಲ್ಲಿ ಇವನು ನನಗೆ ಹೂವೋ ಮುಳ್ಲೋ

[01:44.03] ಮನದ ಕಡಲಿನಲ್ಲಿ ಇವನು ಅಲೆಯೋ ಭೀಕರ ಸುಳಿಯೊ

[01:51.61] ಅರಿಯದಂಥ ಹೊಸ ಕಂಪನವೊ ಯಾಕೋ ಕಾಣೆನೊ

[01:58.68] ಅರಿತೊ ಮರೆತೊ ಜೀವ ವಾಲದಂತೆ ಇವನ ಕಡೆಗೆ

[02:06.29] ಸೋಲದಂತೆ ಕಾಯೇ ಮನವೆ ಉಳಿಸು ನನ್ನನು

[02:13.60] ಇವನು ಇನಿಯಲ್ಲ ತುಂಬ ಸನಿಹ ಬಂದಿಹನಲ್ಲ

[02:50.08] ತಿಳಿದು ತಿಳಿದು ಇವನು ತನ್ನ ತಾನೇ ಸುಡುತಿಹನಲ್ಲ

[02:57.92] ಒಲುಮೆ ಎಂಬ ಸುಳಿಗೆ ಈಜು ಬರದೆ ಇಳಿದಿಹನಲ್ಲ

[03:05.22] ಸಾವಿನಲ್ಲು ನಗುವುದ ಬಲ್ಲ ಏನೋ ಕಳವಳ

[03:12.56] ಮುಳುಗುವವನ ಕೂಗು ಚಾಚುವಂತೆ ಮಾಡಿದೆ ಕೈಯ

[03:19.91] ಜಾರಿ ಬಿಡುವುದೇ ಈ ಹೃದಯ ಏನೋ ತಳಮಳ

[03:27.49] ಇವನು ಇನಿಯನಲ್ಲ ತುಂಬ ಸನಿಹ ಬಂದಿಹನಲ್ಲ