Onde samane
[00:19.29] ಒಂದೇ ಸಮನೆ ನಿಟ್ಟುಸಿರು ಪಿಸುಗುಡುವ ತೀರದ ಮೌನ
[00:28.32] ತುಂಬಿ ತುಳುಕೋ ಕಂಗಳಲಿ ಕರಗುತಿದೆ ಕನಸಿನ ಬಣ್ಣ
[00:37.41] ಎದೆಯ ಜೋಪಡಿಯ ಒಳಗೆ ಕಾಲಿಡದೆ ಕೊಲುತಿದೆ ಒಲವು
[00:46.46] ಮನದ ಕಾರ್ಮುಗಿಲಿನ ತುದಿಗೆ ಮಳೆಬಿಲ್ಲಿನಂತೆ ನೋವು
[00:55.54] ಕೊನೆಯಿರದ ಏಕಾಂತವೆ ಒಲವೆ......
[01:49.52] ಜೀವ ಕಳೆವ ಅಮೃತಕೆ ಒಲವೆಂದು ಹೆಸರಿಡಬಹುದೆ
[01:58.15] ಪ್ರಾಣ ಉಳಿಸೋ ಕಾಯಿಲೆಗೆ ಪ್ರೀತಿ ಎಂದೆನ್ನಬಹುದೇ
[02:07.22] ಹೊಂಗನಸ ಚಾದರದಲ್ಲಿ ಮುಳ್ಳಿನ ಹಾಸಿಗೆಯಲಿ ಮಲಗಿ
[02:16.01] ಯಾತನೆಗೆ ಮುಗುಳ್ನಗು ಬರಲು ಕಣ್ಣ ಹನಿ ಸುಮ್ಮನೆ ಒಣಗಿ
[02:25.09] ಅವಳನ್ನೇ ಜಪಿಸುವುದೆ ಒಲವೆ........
[03:30.11] ನಾಲ್ಕು ಪದದ ಗೀತೆಯಲಿ ಮಿಡಿತಗಳ ಬಣ್ಣಿಸಬಹುದೆ
[03:38.91] ಮೂರು ಸ್ವರದ ಹಾಡಿನಲ್ಲಿ ಹೃದಯವನು ಹರಿಬಿಡಬಹುದೆ
[03:47.97] ಉಕ್ಕಿ ಬರುವ ಕಂಠದಲಿ ನರಳುತಿದೆ ನಲುಮೆಯ ಗಾನ
[03:57.03] ಬಿಕ್ಕಳಿಸುವ ಎದೆಯೊಳಗೆ ನಗುತಲಿದೆ ಮಡಿದ ಕವನ
[04:06.06] ಒಂಟಿತನದ ಗುರುವೇ ಒಲವೆ..........
