Lrc Player

Mugulu nage ya

Sonu Nigam
[04:16.97]·Synced by Guest·
This lyric sheet isn't paired with a song yet, so lines are shown but won't sync or seek.

[00:40.37] ಮುಗುಳು ನಗೆಯೇ ನೀ ಹೇಳು.. ಮುಗುಳು ನಗೆಯೇ ನೀ ಹೇಳು..

[00:48.47] ಯಾರಿರದ ವೇಳೆಯಲ್ಲಿ ನೀ ಏಕೆ ಜೊತೆಗಿರುವೆ..

[00:57.12] ತುಸು ಬಿಡಿಸಿ ಹೇಳು ನನಗೆ, ನನ್ನ ತುಟಿಯೆ ಬೇಕೇ ನಿನಗೆ,

[01:05.68] ನನ್ನೆಲ್ಲ ನೋವಿಗೆ ನಗುವೇ ನೀನೇಕೆ ಹೀಗೆ..?

[01:14.27] ಮುಗುಳು ನಗೆಯೇ ನೀ ಹೇಳು.. ಮುಗುಳು ನಗೆಯೇ ನೀ ಹೇಳು..

[01:46.55] ಸಾಕಾಗದ ಏಕಾಂತವ ನಿನ್ನಿಂದ ನಾ ಕಲಿತೆ..!

[01:55.21] ಯಾಕಾಗಿ ನೀ ಮರೆಮಾಚುವೆ ನನ್ನೆಲ್ಲ ಭಾವುಕತೆ..!

[02:04.00] ಸೋತಂತಿದೆ ಸಂಭಾಷಣೆ ಗೆಲ್ಲುವುದು ನಿನಗೆ ಹೊಸತೇ..?

[02:12.31] ಅಳುವೊಂದು ಬೇಕು ನನಗೆ ಅರೆ ಗಳಿಗೆ ಹೋಗು ಹೊರಗೆ,

[02:20.88] ಇಷ್ಟೊಳ್ಳೆ ಸ್ನೇಹಿತನಾಗಿ ಕಾಡಿದರೆ ಹೇಗೆ..?

[02:29.42] ಮುಗುಳು ನಗೆಯೇ ನೀ ಹೇಳು.. ಮುಗುಳು ನಗೆಯೇ ನೀ ಹೇಳು..

[02:37.98] ಯಾರಿರದ ವೇಳೆಯಲ್ಲಿ ನೀನೇಕೆ ಜೊತೆಗಿರುವೆ..?

[03:12.49] ಕಣ್ಣಾಲಿಯಾ ಜಲಪಾತವಾ ಬಂಧಿಸಲು ನೀ ಯಾರು..?

[03:20.67] ನೀ ಮಾಡುವ ನಗೆ ಪಾಟಲು ಖಂಡಿಸಲು ನಾ ಯಾರು..?

[03:29.48] ಸಂತೋಷಕು ಸಂತಾಪಕೂ ಇರಲಿ ಬಿಡು ಒಂದೇ ಬೇರು

[03:38.04] ಕಂಗಳಲಿ ಬಂದಾ ಮಳೆಗೆ ಕೊಡೆ ಹಿಡಿವ ಆಸೆಯೇ ನಿನಗೆ..?

[03:46.60] ಅತ್ತು ಬಿಡು ನನ್ನ ಜೊತೆಗೆ ನಗಬೇಡ ಹೀಗೆ..

[03:55.17] ಮುಗುಳು ನಗೆಯೇ ನೀ ಹೇಳು.. ಮುಗುಳು ನಗೆಯೇ ನೀ ಹೇಳು..

[04:03.57] ಯಾರಿರದ ವೇಳೆಯಲ್ಲಿ ನೀ ಏಕೆ ಜೊತೆಗಿರುವೆ..?