Nenapugala matu madhura
[00:44.09] ನೆನಪುಗಳ ಮಾತು ಮಧುರ ಮೌನಗಳ ಹಾಡು ಮಧುರ
[00:57.35] ಕನಸೇ ಇರಲಿ ನನಸೆ ಇರಲಿ ಪ್ರೀತಿ ಕೊಡುವ ಕನಸೇ ಮಧುರ
[01:45.86] ಸಾವಿರ ಹೂಗಳ ಹುಡುಕಿದರೂ ಚಂದ ಬೇರೆ ಗಂಧ ಬೇರೆ ಸ್ಪರ್ಶ ಒಂದೆ
[01:59.17] ಸಾವಿರ ಹೃದಯವ ಹುಡುಕಿದರೂ ಅಳತೆ ಬೇರೆ ಸೆಳೆತ ಬೇರೆ ಪ್ರೀತಿಯೊಂದೆ
[02:09.25] ತಿಂಗಳ ಬೆಳಕನು ಹಿಡಿದು ಗಾಳಿಗೆ ಸವರೋ ಪ್ರೀತಿ
[02:16.08] ಗಾಳಿಯ ಗಂಧವ ಕಡೆದು ಅಂದವ ಹೆಣೆಯೋ ಪ್ರೀತಿ
[02:22.66] ಸಂಖ್ಯೆ ಇರದೇ ಗುಣಿಸೋ ಪ್ರೀತಿ ನಿದ್ದೆ ನುಂಗಿ ಕುಣಿಸೋ ಪ್ರೀತಿ
[02:36.32] ಶಬ್ದವಿರಲಿ ಶಬ್ದವಿರಲಿ ಪ್ರೀತಿ ಕೊಡುವ ಶಬ್ದ ಮಧುರ
[03:36.37] ಸಾವಿರ ಹಾಡನು ಹುಡುಕಿದರೂ ತಾಳ ಬೇರೆ ಮೇಳ ಬೇರೆ ಸ್ವರಗಳೊಂದೆ
[03:49.78] ಸಾವಿರ ಪ್ರೇಮಿಯ ಹುಡುಕಿದರೂ ತವಕ ಬೇರೆ ಪುಳಕ ಬೇರೆ ಪ್ರೀತಿಯೊಂದೆ
[04:00.10] ನದಿಗಳ ಕಲರವಗಳಲಿ ಅಲೆಗಳು ತೊಯೋ ಪ್ರೀತಿ
[04:06.93] ಅಲೆಗಳ ಹೊಸತನ ಕಡೆದು ಕಲೆಗಳ ಹೆಣೆಯೋ ಪ್ರೀತಿ
[04:13.47] ಚಿಲುಮೆಯಂತೆ ಚಿಮ್ಮೋ ಪ್ರೀತಿ ಕುಲುಮೆಯೊಳಗೆ ಕಾಯ್ಸೋ ಪ್ರೀತಿ
[04:27.07] ಸ್ವಾರ್ಥವಿರಲಿ ಸ್ವಾರ್ಥವಿರಲಿ ಪ್ರೀತಿ ಕೊಡುವ ಸ್ವಾರ್ಥ ಮಧುರ
