[iSongs.info] 05 - Mungaru Maleye
[01:19.06] ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ
[01:21.19] ನಿನ್ನ ಮುಗಿಲ ಸಾಲೆ..ಧರೆಯ ಕೊರಳ ಪ್ರೇಮದ ಮಾಲೆ..
[01:21.72] ಸುರಿವ ಒಲುಮೆಯ ಜಡಿ ಮಳೆಗೆ..ಪ್ರೀತಿ ಮೂಡಿದೆ
[01:22.25] ಯಾವ ಚಿಪ್ಪಿನಲ್ಲಿ..ಯಾವ ಹನಿಯು ಮುತ್ತಾಗುವುದೊ..
[01:22.78] ಒಲವು ಎಲ್ಲಿ ಕುಡಿ ಒಡೆಯುವುದೊ..ತಿಳಿಯದಾಗಿದೆ
[01:23.06] ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ
[01:24.65] ಭುವಿ ಕೆನ್ನೆ ತುಂಬ..ಮುಗಿಲು ಸುರಿದ ಮುತ್ತಿನ ಗುರುತು
[01:25.70] ನನ್ನ ಎದೆಯ ತುಂಬ..ಅವಳು ಬಂದ ಹೆಜ್ಜೆಯ ಗುರುತು..
[01:26.23] ಹೆಜ್ಜೆ ಗೆಜ್ಜೆಯ ಸವಿ ಸದ್ದು..ಪ್ರೇಮನಾದವೊ
[01:26.76] ಎಳೆ ಮುಗಿಲಿನಲ್ಲಿ..ರಂಗು ಚೆಲ್ಲಿ ನಿಂತಳು ಅವಳು..
[01:27.31] ಬರೆದು ಹೆಸರ ಕಾಮನ ಬಿಲ್ಲು…ಏನು ಮೋಡಿಯೊ
[01:27.82] ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ
[01:32.35] ಯಾವ ಹನಿಗಳಿಂದ..ಯಾವ ನೆಲವು ಹಸಿರಾಗುವುದೊ
[01:35.26] ಯಾರ ಸ್ಪರ್ಷದಿಂದ..ಯಾರ ಮನವು ಹಸಿಯಾಗುವುದೊ..
[01:37.66] ಯಾರ ಉಸಿರಲ್ಯಾರ ಹೆಸರೊ..ಯಾರು ಬರೆದರೊ
[01:38.18] ಯಾವ ಪ್ರೀತಿ ಹೂವು..ಯಾರ ಹೃದಯದಲ್ಲರಳುವುದೊ..
[01:38.73] ಯಾರ ಪ್ರೇಮ ಪೂಜೆಗೆ ಮುಡಿಪೊ..ಯಾರು ಬಲ್ಲರು
[01:39.26] ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ
[01:40.84] ಒಲವ ಚೆಂದಮಾಮ..ನಗುತ ಬಂದ ಮನದಂಗಳಕೆ
[01:41.37] ಪ್ರೀತಿ ಬೆಳಕಿನಲ್ಲಿ..ಹೃದಯ ಹೊರಟಿದೆ ಮೆರವಣಿಗೆ..
[01:41.64] ಅವಳ ಪ್ರೇಮದೂರಿನ ಕಡೆಗೆ..ಪ್ರೀತಿ ಪಯಣವೊ
[01:42.17] ಪ್ರಣಯದೂರಿನಲ್ಲಿ ಕಳೆದು ಹೋದ ಸುಖವ ಇಂದು..
[01:42.71] ಧನ್ಯನಾದೆ ಪಡೆದುಕೊಂಡು..ಹೊಸ ಜನ್ಮವೋ
[01:43.24] ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ
