Lrc Player

Nanamele Nanageega

Sonu Nigam
[04:13.39]·Synced by Gireesh M T·
This lyric sheet isn't paired with a song yet, so lines are shown but won't sync or seek.

[00:26.79] ನನಮೇಲೆ ನನಗೀಗ ಅನುಮಾನ ಶುರುವಾಗಿದೆ

[00:34.77] ಬಡಪಾಯಿ ಎದೆಯಲ್ಲಿ ಒಲವೀಗ ಮನೆಮಾಡಿದೆ

[00:41.94] ಸನ್ನೆಯಲ್ಲಿ ಏನೇನೋ ಹೇಳುವಾಗ

[00:47.55] ಎಲ್ಲ ಮಾತು ನನ್ನಲ್ಲೆ ಬಾಕಿ ಈಗ

[00:53.12] ಸರಿಹೋಗುವ ಮುನ್ಸೂಚನೆ

[00:58.43] ಇತ್ತೀಚೆಗೆ ಸುಳಿದಾಡಿದೆ

[01:04.02] ನನಮೇಲೆ ನನಗೀಗ ಅನುಮಾನ ಶುರುವಾಗಿದೆ

[01:41.50] ಭೇಟಿಯಾದ ಜಾಗ ನಮ್ಮನ್ನೆ ಕಾಯುವಾಗ

[01:46.52] ಏಕಾಂತವೀಗ ನನ್ನ ಕಾಡಿದೆ

[01:52.11] ಒಂದೇ ಒಂದು ಮಾತು ನೀ ಚಂದವಾಗಿ ಆಡಿ

[01:56.84] ನನ್ನ ಧ್ಯಾನವೆಲ್ಲ ಲೂಟಿ ಮಾಡಿದೆ

[02:02.94] ಉಸಿರಿನ ಬಿಸಿಯು ತಗುಲಿದ ಮೇಲೆ

[02:08.25] ಹುಡುಗನ ಪಾಡು ಹೀಗಾಗಿದೆ

[02:13.30] ಪದ ಗೀಚುವ ಬೆರಳೆಲ್ಲವೂ

[02:18.08] ಪದವಿಲ್ಲದೆ ಪರದಾಡಿದೆ

[03:01.12] ಇನ್ನೇಕೆ ಕಾಲಹರಣ

[03:03.78] ದೂರಾನೇ ತುಂಬ ಕಠಿಣ

[03:06.17] ಕಣ್ಣಲ್ಲೆ ನೀಡು ಎಲ್ಲಾ ಸೂಚನೆ

[03:11.49] ಎಲ್ಲೇ ಹೋದರೂನು, ನೀ ಎಲ್ಲೇ ಬಂದರೂನು

[03:16.79] ನನಗೀಗ ನಿನ್ನದೊಂದೇ ಪ್ರಾರ್ಥನೆ

[03:22.93] ಜೀವದ ಭಾಷೆ ಹೇಳಲು ನನಗೆ

[03:28.24] ಜೀವವೆ ಹೋದ ಹಾಗಾಗಿದೆ

[03:33.29] ಅನುರಾಗದ ಅನುವಾದಕೆ

[03:38.84] ಸರಿಹೋಗುವ ಪದವೆಲ್ಲಿದೆ

[03:44.14] ನನಮೇಲೆ ನನಗೀಗ ಅನುಮಾನ ಶುರುವಾಗಿದೆ