Eno Ide
[00:37.14] ಏನೋ ಇದೆ ಏನೋ ಇದೆ,ಈ ಪ್ರೀತಿಲಿ ಏನೋ ಇದೆ
[00:42.45] ಏನಿದೆ ಏನೇನಿದೆ,ಈ ಪ್ರೀತಿಲಿ ಇನ್ನೇನಿದೆ
[00:57.85] ಬಾಳಿನ ದೀಪವೇ ಇಂದು ಆರಿ ಹೋಗಿದೆ
[01:01.31] ನನ್ನಯ ನೆರಳೇ ನನ್ನ ಬಿಟ್ಟು ಹೋಗಿದೆ
[01:05.03] ಜೀವನ ಅಲ್ಲೋಲ ಕಲ್ಲೋಲವಾಗಿದೆ
[01:08.74] ಕರೆಯುವ ಕೊರಳೇ ಮೌನ ತಾಳಿದೆ
[01:12.73] ಏನಿದೆ, ಏನೋ ಇದೆ, ಈ ಪ್ರೀತಿಲಿ ಏನೋ ಇದೆ
[01:23.89] ಏನೋ ಇದೆ, ಏನೇನಿದೆ,ಈ ಪ್ರೀತಿಲಿ ಇನ್ನೇನಿದೆ
[02:21.26] ಓ ತನ್ನ ರಾಗವನ್ನೇ ಹಾಡು ತೊರೆದಂತೆ
[02:24.46] ಭಾವದಲ್ಲಿ ಬರೆದ ಚಿತ್ರ ಹರಿದಂತೆ
[02:28.70] ಕನ್ನ ಹಾಕಿ ಹೃದಯವನ್ನೇ ಕೊರೆದಂತೆ
[02:32.16] ನನ್ನ ಶೋಕಗೀತೆ ನಾನೇ ಬರೆದಂತೆ
[02:36.14] ಪರಿತಾಪವೇ ಪ್ರೀತಿಯ ಫಲವೇ
[02:39.34] ಸರಿ ಉತ್ತರ ನೀಡು ನೀ ಒಲವೇ
[02:43.59] ಬೆಳದಿಂಗಳೇ, ಮರೆಯಾಗಿದೆ, ಮರೆಯಾಗಿದೆ
[02:55.01] ಆಕಾಶವೇ ಸುಳ್ಳಾಗಿದೆ, ಈ ಭೂಮಿಯು ಮುಳ್ಳಾಗಿದೆ
[03:06.70] ಏನೋ ಇದೆ, ಏನೇನಿದೆ,ಈ ಪ್ರೀತಿಲಿ ಇನ್ನೇನಿದೆ
[03:48.93] ಕಾಡುವಂಥ ನೂರು ನೋವು ಇರುಳಲ್ಲಿ
[03:52.39] ನಾಟಿದಂತೆ ಬಾಣವೊಂದು ಎದೆಯಲ್ಲಿ
[03:56.38] ನೀನೇ ಬೇಕು ಎಂಬ ನನ್ನ ಛಲದಲ್ಲಿ
[03:59.84] ಲೂಟಿಯಾಗಿ ಹೋದೆನಲ್ಲ ಒಲವಲ್ಲಿ
[04:03.82] ಇದು ಎಚ್ಚರವಿಲ್ಲದ ಕನಸೇ
[04:07.28] ಅಥವಾ ಇದು ಸಾವಿನ ತಿನಿಸೇ
[04:11.53] ನಿಜ ಬಣ್ಣವೇ, ಬಯಲಾಗಿದೆ, ಬಯಲಾಗಿದೆ
[04:22.69] ಆಕಾಶವೇ ಸುಳ್ಳಾಗಿದೆ, ಈ ಭೂಮಿಯು ಮುಳ್ಳಾಗಿದೆ
[04:35.17] ಬಾಳಿನ ದೀಪವೇ ಇಂದು ಆರಿ ಹೋಗಿದೆ
[04:38.35] ನನ್ನಯ ನೆರಳೇ ನನ್ನ ಬಿಟ್ಟು ಹೋಗಿದೆ
[04:42.34] ಜೀವನ ಅಲ್ಲೋಲ ಕಲ್ಲೋಲವಾಗಿದೆ
[04:46.06] ಕರೆಯುವ ಕೊರಳೇ ಮೌನ ತಾಳಿದೆ
[04:49.78] ಏನಿದೆ, ಏನೋ ಇದೆ, ಈ ಪ್ರೀತಿಲಿ ಏನೋ ಇದೆ, ಹೇ
