Lrc Player

yt1s.com - ಕನನಡವದರ ಬರ ನಡಯಲಲ Kannadavendare K S Nissar Ahmad Sai Shiv

Unknown artist
[05:14.62]·Synced by Guest·
This lyric sheet isn't paired with a song yet, so lines are shown but won't sync or seek.

[00:04.68] ಕನ್ನಡ ಎಂದರೆ ?

[00:21.94] ಕನ್ನಡವೆಂದರೆ ಬರಿ ನುಡಿಯಲ್ಲ ಹಿರಿದಿದೆ ಅದರರ್ಥ; ಜಲವೆಂದರೆ ಕೇವಲ ನೀರಲ್ಲ. ಅದು ಪಾವನ ತೀರ್ಥ ||

[01:25.44] ಕನ್ನಡವೆಂದರೆ ಬರಿ ನಾಡಲ್ಲ ; ಭೂಪಟ, ಗೆರೆ, ಚುಕ್ಕೆ ; ಮರವೆಂದರೆ ಬರಿ ಕಟ್ಟಿಗೆಯೆ ? ಶ್ರೀಗಂಧದ ಚಕ್ಕೆ.||1||

[02:09.03] ಕನ್ನಡ ಬರಿ ಕರ್ನಾಟಕವಲ್ಲ ಅಸೀಮ, ಅದು ಅಡಿಗಂತ : ದೇವರು ಕೇವಲ ವಿಗ್ರಹವಲ್ಲ, ಅಂತರ್ಭಾವ ಅನಂತ.||2||

[03:12.10] ಕನ್ನಡವೆಂದರೆ ಜನಜಂಗುಳಿಯಲ್ಲ ಜೀವನ ಶೈಲಿ, ವಿಧಾನ ; ವಾಯುವೆಂದರೆ ಬರಿ ಹವೆಯೇ ಅಲ್ಲ : ಉಸಿರದು, ಪಂಚಪ್ರಾಣ.||3||

[03:54.62] ಕನ್ನಡವಲ್ಲ ತಿಂಗಳು ನಡೆಸುವ ಗುಲ್ಲಿನ ಕಾಮನಬಿಲ್ಲು ; ರವಿ ಶಶಿ ತಾರೆಯ ನಿತ್ಯೋತ್ಸವವದು, ಸರಸತಿ ವೀಣೆಯ ಸೊಲ್ಲು.||4||