Lrc Player

Mguli

Mugul
[04:12.81]·
This lyric sheet isn't paired with a song yet, so lines are shown but won't sync or seek.

[00:39.60] ಮುಗುಳು ನಗೆಯೇ ನೀ ಹೇಳು.. ಮುಗುಳು ನಗೆಯೇ ನೀ ಹೇಳು..

[00:48.37] ಯಾರಿರದ ವೇಳೆಯಲ್ಲಿ ನೀ ಏಕೆ ಜೊತೆಗಿರುವೆ..

[00:56.34] ತುಸು ಬಿಡಿಸಿ ಹೇಳು ನನಗೆ, ನನ್ನ ತುಟಿಯೆ ಬೇಕೇ ನಿನಗೆ,

[01:05.10] ನನ್ನೆಲ್ಲ ನೋವಿಗೆ ನಗುವೇ ನೀನೇಕೆ ಹೀಗೆ..?

[01:14.13] ಮುಗುಳು ನಗೆಯೇ ನೀ ಹೇಳು.. ಮುಗುಳು ನಗೆಯೇ ನೀ ಹೇಳು..

[01:46.27] ಸಾಕಾಗದ ಏಕಾಂತವ ನಿನ್ನಿಂದ ನಾ ಕಲಿತೆ..!

[01:54.51] ಯಾಕಾಗಿ ನೀ ಮರೆಮಾಚುವೆ ನನ್ನೆಲ್ಲ ಭಾವುಕತೆ..!

[02:02.74] ಸೋತಂತಿದೆ ಸಂಭಾಷಣೆ ಗೆಲ್ಲುವುದು ನಿನಗೆ ಹೊಸತೇ..?

[02:11.77] ಅಳುವೊಂದು ಬೇಕು ನನಗೆ ಅರೆ ಗಳಿಗೆ ಹೋಗು ಹೊರಗೆ,

[02:20.29] ಇಷ್ಟೊಳ್ಳೆ ಸ್ನೇಹಿತನಾಗಿ ಕಾಡಿದರೆ ಹೇಗೆ..?

[02:29.06] ಮುಗುಳು ನಗೆಯೇ ನೀ ಹೇಳು.. ಮುಗುಳು ನಗೆಯೇ ನೀ ಹೇಳು..

[02:37.56] ಯಾರಿರದ ವೇಳೆಯಲ್ಲಿ ನೀನೇಕೆ ಜೊತೆಗಿರುವೆ..?

[03:11.29] ಕಣ್ಣಾಲಿಯಾ ಜಲಪಾತವಾ ಬಂಧಿಸಲು ನೀ ಯಾರು..?

[03:20.06] ನೀ ಮಾಡುವ ನಗೆ ಪಾಟಲು ಖಂಡಿಸಲು ನಾ ಯಾರು..?

[03:28.56] ಸಂತೋಷಕು ಸಂತಾಪಕೂ ಇರಲಿ ಬಿಡು ಒಂದೇ ಬೇರು

[03:37.85] ಕಂಗಳಲಿ ಬಂದಾ ಮಳೆಗೆ ಕೊಡೆ ಹಿಡಿವ ಆಸೆಯೇ ನಿನಗೆ..?

[03:46.09] ಅತ್ತು ಬಿಡು ನನ್ನ ಜೊತೆಗೆ ನಗಬೇಡ ಹೀಗೆ..

[03:54.59] ಮುಗುಳು ನಗೆಯೇ ನೀ ಹೇಳು.. ಮುಗುಳು ನಗೆಯೇ ನೀ ಹೇಳು..

[04:03.35] ಯಾರಿರದ ವೇಳೆಯಲ್ಲಿ ನೀ ಏಕೆ ಜೊತೆಗಿರುವೆ