Al Fajr_Kannada
[00:04.63] ಪ್ರಭಾತದ ಮೇಲಾಣೆ!
[00:06.88] ಹತ್ತು ರಾತ್ರಿಗಳ ಮೇಲಾಣೆ!
[00:08.14] ಸಮ ಮತ್ತು ಬೆಸಗಳ ಮೇಲಾಣೆ!
[00:10.13] ರಾತ್ರಿ ಚಲಿಸುತ್ತಿರುವಾಗ ಅದರ ಮೇಲಾಣೆ!
[00:12.39] ವಿಷಯಪ್ರಜ್ಞೆ ಯುಳ್ಳವನಿಗೆ ಅದರಲ್ಲಿ (ಮೇಲೆ ಹೇಳಿರುವುದರಲ್ಲಿ) ಆಣೆಯಿದೆಯೇ?
[00:16.63] ಆದ್ ಸಮುದಾಯದೊಂದಿಗೆ ತಮ್ಮ ಪ್ರಭು ಏನು ಮಾಡಿದನೆಂದು ತಾವು ಕಂಡಿಲ್ಲವೇ?
[00:21.39] ಅಂದರೆ ಸ್ಥಂಭಗಳ ಒಡೆಯರಾದ ಇರಮ್ ಗೋತ್ರದೊಂದಿಗೆ.
[00:24.38] ಅದರಂತಿರುವ ಒಂದನ್ನು ದೇಶಗಳಲ್ಲಿ ಸೃಷ್ಟಿಸಲ್ಪಡದಿರುವ ಗೋತ್ರ.
[00:29.64] ಕಣಿವೆಯಲ್ಲಿ ಬಂಡೆಗಳನ್ನು ಒಡೆದು ಕಟ್ಟಡ ನಿರ್ಮಿಸುತ್ತಿದ್ದ ಸಮೂದ್ ಜನಾಂಗದೊಂದಿಗೆ ಮತ್ತು ಮೊಳೆಗಳ ಒಡೆಯನಾದ ಫಿರ್ ಔನ್ ನೊಂದಿಗೆ.
[00:37.38] ಅವರು ಭೂಮಿಯಲ್ಲಿ ಅತಿಕ್ರಮವೆಸಗಿದವರು ಮತ್ತು ಅಲ್ಲಿ ಕ್ಷೋಭೆಯನ್ನು ಹೆಚ್ಚಿಸಿದವರಾಗಿರುವರು.
[00:44.88] ಆಗ ತಮ್ಮ ಪ್ರಭು ಅವರ ಮೇಲೆ ಶಿಕ್ಷೆಯ ಚಾಟಿಯನ್ನು ಸುರಿಸಿದನು.
[00:50.39] ಖಂಡಿತವಾಗಿಯೂ ತಮ್ಮ ಪ್ರಭು ಹೊಂಚಿನ ತಾಣದಲ್ಲೇ ಇರುವನು.
[00:55.13] ಆದರೆ ಮನುಷ್ಯನನ್ನು ಅವನ ಪ್ರಭು ಪರೀಕ್ಷಿಸಿ, ತರುವಾಯ ಅವನನ್ನು ಆದರಿಸಿ ಅವನಿಗೆ ಸುಖವನ್ನು ಕರುಣಿಸಿದರೆ, ಅವನು ‘ನನ್ನ ಪ್ರಭು ನನ್ನನ್ನು ಆದರಿಸಿರುವನು’ ಎಂದು ಹೇಳುವನು.
[01:07.88] ಆದರೆ ಅವನನ್ನು (ಮನುಷ್ಯನನ್ನು) ಅವನು ಪರೀಕ್ಷಿಸಿ, ತರುವಾಯ ಅವನ ಅನ್ನಾಧಾರವನ್ನು ಸಂಕುಚಿತಗೊಳಿಸಿದರೆ ಅವನು ‘ನನ್ನ ಪ್ರಭು ನನ್ನನ್ನು ನಿಂದಿಸಿರುವನು’ ಎಂದು ಹೇಳುವನು.
[01:19.39] ಅಲ್ಲ, ಆದರೆ ನೀವು ಅನಾಥನನ್ನು ಆದರಿಸುತ್ತಿಲ್ಲ.
[01:24.88] ಬಡವನಿಗೆ ಅನ್ನ ನೀಡಲು ನೀವು ಪ್ರೇರಣೆ ನೀಡುತ್ತಿಲ್ಲ. ನೀವು ಉತ್ತರಾಧಿಕಾರ ಸೊತ್ತನ್ನು ಬಾಚಿ ತಿನ್ನುತ್ತಿರುವಿರಿ ಮತ್ತು ಸಂಪತ್ತನ್ನು ನೀವು ಮಿತಿಮೀರಿ ಪ್ರೀತಿಸುತ್ತಿರುವಿರಿ.
[01:47.38] ಅಲ್ಲ, ಭೂಮಿಯನ್ನು ಪುಡಿ ಪುಡಿ ಮಾಡ ಲಾಗುವಾಗ, ತಮ್ಮ ಪ್ರಭು ಮತ್ತು ಸಾಲುಸಾಲಾಗಿ ಮಲಕ್ ಗಳು ಬಂದಾಗ ಹಾಗೂ ಅಂದು ನರಕಾಗ್ನಿಯನ್ನು ತರಲಾದಾಗ. ಆ ದಿನದಂದು ಮನುಷ್ಯನಿಗೆ ಜ್ಞಾಪಕ ಬರುವುದು. ಅವನಿಗೆ ಜ್ಞಾಪಕವು ಬರುವುದಾದರೂ ಎಲ್ಲಿಂದ?
[03:12.13] ಅವನು ಹೇಳುವನು: ‘ಅಯ್ಯೋ! ನಾನು ನನ್ನ ಜೀವನಕ್ಕಾಗಿ (ಸತ್ಕರ್ಮಗಳನ್ನು) ಪೂರ್ವಭಾವಿಯಾಗಿ ಮಾಡಿಟ್ಟಿರುತ್ತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು!?’
[03:34.89] ಆದ್ದರಿಂದ ಆ ದಿನದಂದು ಅಲ್ಲಾಹು ಶಿಕ್ಷಿಸುವ ರೀತಿಯಲ್ಲಿ ಯಾರೂ ಶಿಕ್ಷಿಸಲಾರರು.
[03:40.89] ಅವನು ಹಿಡಿದು ಬಂಧಿಸುವಂತೆ ಯಾರೂ ಹಿಡಿದು ಬಂಧಿಸಲಾರರು.
[04:50.39] ಓ ಶಾಂತವಾಗಿರುವ ಆತ್ಮವೇ! ನೀನು ನಿನ್ನ ಪ್ರಭುವಿನೆಡೆಗೆ ಸಂತೃಪ್ತನಾಗಿ ಮತ್ತು ಸಂತೃಪ್ತಿಗೆ ಪಾತ್ರನಾಗಿ ಮರಳು.
[05:23.39] ತರುವಾಯ ನನ್ನ ದಾಸರ ಗುಂಪಿನಲ್ಲಿ ಪ್ರವೇಶಿಸು.
[05:41.63] ನನ್ನ ಸ್ವರ್ಗವನ್ನು ಪ್ರವೇಶಿಸು.
