Pavamaana Jagadaprana
[00:05.35] ಪವಮಾನ ಪವಮಾನ ಜಗದಾ ಪ್ರಾಣಾ
[00:45.57] ಸಂಕರುಷಣ ಭವಭಯಾರಣ್ಯ ದಹನ |ಪ|
[00:55.33] ಶ್ರವಣವೆ ಮೊದಲಾದ ನವವಿಧ ಭಕುತಿಯ
[00:57.84] ತವಕದಿಂದಲಿ ಕೊಡು ಕವಿಗಳ ಪ್ರಿಯ ||
[01:30.33] ಹೇಮ ಕಚ್ಚುಟ ಉಪವೀತ ಧರಿಪ ಮಾರುತ ಕಾಮಾದಿ ವರ್ಗ ರಹಿತ
[01:51.33] ವ್ಯೋಮಾದಿ ಸರ್ವವ್ಯಾಪುತ ಸತತ ನಿರ್ಭೀತ ರಾಮಚಂದ್ರನ ನಿಜದೂತ
[02:08.10] ಯಾಮ ಯಾಮಕೆ ನಿನ್ನಾರಾಧಿಪುದಕೆ
[02:09.59] ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ
[02:15.07] ಈ ಮನಸಿಗೆ ಸುಖಸ್ತೋಮವ ತೋರುತ
[02:16.84] ಪಾಮರ ಮತಿಯನು ನೀ ಮಾಣಿಪುದು |1|
[02:47.06] ವಜ್ರ ಶರೀರ ಗಂಭೀರ ಮುಕುಟಧರ ದುರ್ಜನವನ ಕುಠಾರ
[03:04.57] ನಿರ್ಜರ ಮಣಿದಯಾ ಪಾರ ವಾರ ಉದಾರ ಸಜ್ಜನರಘವ ಪರಿಹಾರ
[03:19.58] ಅರ್ಜುನಗೊಲಿದಂದು ಧ್ವಜವಾನಿಸಿ ನಿಂದು
[03:28.32] ಮೂರ್ಜಗವರಿವಂತೆ ಗರ್ಜನೆ ಮಾಡಿದಿ
[03:29.09] ಹೆಜ್ಜೆ ಹೆಜ್ಜೆಗೆ ನಿನ್ನ ಅಬ್ಜ ಪಾದದ ಧೂಳಿ
[03:31.60] ಮಾರ್ಜನದಲಿ ಭವ ವರ್ಜಿತನೆನಿಸೊ |2|
[04:06.08] ಪ್ರಾಣ ಅಪಾನ ವ್ಯಾನೋದಾನ ಸಮಾನ ಆನಂದ ಭಾರತಿ ರಮಣ
[04:25.81] ನೀನೆ ಶರ್ವಾದಿ ಗೀರ್ವಾಣಾದ್ಯಮರರಿಗೆ ಜ್ಞಾನಧನ ಪಾಲಿಪ ವರೇಣ್ಯ
[04:41.34] ನಾನು ನಿರುತದಲಿ ಏನೇನೆಸಗಿದೆ
[04:44.08] ಮಾನಸಾದಿ ಕರ್ಮ ನಿನಗೊಪ್ಪಿಸಿದೆನೊ
[04:49.57] ಪ್ರಾಣನಾಥ ಸಿರಿವಿಜಯವಿಠಲನ
[04:51.59] ಕಾಣಿಸಿ ಕೊಡುವದು ಭಾನು ಪ್ರಕಾಶ |3|
