Lrc Player

Bhale_Bhale_Chandada_-_Amrutavarshini

Unknown artist
[05:35.93]·Synced by Guest·
This lyric sheet isn't paired with a song yet, so lines are shown but won't sync or seek.

[00:24.63] ಎಲ್ಲಾ ಶಿಲ್ಪಗಳಿಗು ಒಂದೊಂದು ಹಿಂದಿನ ಕಥೆಯಿದೆ

[00:30.88] ನನ್ನ ಶಿಲ್ಪ ಚೆಲುವೆ ಇವಳ ಮುಂದೆನ್ನ ಬದುಕಿದೆ.....

[01:25.88] ಭಲೇ ಭಲೇ ಚೆಂದದ ಚೆಂದುಳ್ಳಿ ಹೆಣ್ಣು ನೀನು

[01:28.64] ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು

[01:33.63] ನಿನ್ನ ಚಂದ ಹೊಗಳಲು ಪದ ಪುಂಜ ಸಾಲದು

[01:39.14] ನಿನ್ನ ಕಂಗಳ ಕಾಂತಿಗಳಿಂದಾನೆ ತಾನೇನೆ ಊರೆಲ್ಲ ಹೊಂಬೆಳಕು

[01:43.89] ನೀನು ಹೆಜ್ಜೆಯೇ ಇಟ್ಟಲ್ಲಲ್ಲೆಲ್ಲಾನು ಕಾಲಡಿ ಹೂವಾಗಿ ಬರಬೇಕು

[02:32.12] ತಂಪು ತಂಗಾಳಿಯು ತಂದಾನ ಹಾಡಿತು ಕೇಳೋಕೆ ನಾ ಹೋದರೆ

[02:37.12] ನಿನ್ನ ಈ ಸರಿಗಮ ಕೇಳಿತು ಸಮಸಮ ಹಂಚಿತು

[02:44.87] ಝುಳುಝುಳು ನೀರಿಲ್ಲಿ ತಿಲ್ಲಾನ ಹಾಡಿತು ನೋಡೋಕೆ ನಾ ಬಂದರೆ

[02:50.12] ನಿನ್ನದೇ ಥಕಥೈ ಕಂಡಿತು ತಕದಿಮಿ ಹೆಚ್ಚಿತು

[02:57.37] ಅಲ್ಲೊಂದು ಸುಂದರ ತೋಟವಿದೆ ಅಲ್ಲಿ ನೂರಾರು ಹೂಗಳ ರಾಶಿಯಿದೆ

[03:03.63] ಇಲ್ಲೊಂದು ಪ್ರೀತಿಯ ಹಾಡು ಇದೆ ಇಲ್ಲಿ ಹತ್ತಾರು ಮೆಚ್ಚಿನ ಸಾಲು ಇವೆ

[03:08.62] ಎಲ್ಲ ಸಾಲಲ್ಲು ಎಣುಕೋ ಅಕ್ಷರ ನಿಂದೇನ

[03:13.37] ಉತ್ತರ ಇಲ್ಲದ ಸಿಹಿ ಒಗಟು ನಿನ್ನಂದ ನಿನ್ನಂದ ನಿನ್ನಂದವೇ.....

[04:09.62] ಅತ್ತ ಕಾಳಿದಾಸ ಇತ್ತ ರವಿವರ್ಮ ನಿನ್ನ ಹಿಂದೆ ಬಂದರು

[04:14.37] ಅಂದವ ಹೊಗಳಲು ಸಾಧ್ಯವೇ ನಿನ್ನ ಮುಂದೆ ಮೌನವೇ

[04:22.64] ಅತ್ತ ಊರ್ವಶಿಯು ಇತ್ತ ಮೇನಕೆಯು ನಿನ್ನ ನಡೆ ಕಂಡರೆ

[04:28.12] ನಡುವೆ ಉಳುಕುತ್ತೆ ಅಲ್ಲವೇ ನಿನ್ನ ಬಿಟ್ಟರಿಲ್ಲವೆ

[04:35.12] ಅಲ್ಲೊಂದು ರಾಜರ ಬೀದಿಯಿದೆ ನೀನು ಅಲ್ಲಿಂದ ತೇರಲ್ಲಿ ಏರಿ ಬಂದೆ

[04:41.64] ಇಲ್ಲೊಂದು ಹೃದಯ ಕೋಟೆಯಿದೆ ಇಲ್ಲಿ ಎಂತೆಂಥ ಕನಸೋ ಕಾವಲಿದೆ

[04:46.38] ಎಲ್ಲ ಕಾವಲು ದಾಟಿದ ಚೋರಿಯು ನೀನೇನಾ

[04:51.12] ಹತ್ತಿರ ಇದ್ದರು ಬಲು ಎತ್ತರ ಎತ್ತರ ನಿನ್ನಂದ ನಿನ್ನಂದವೆ......